Walter DSouza

Walter DSouza

ಅಪ್ಪಟ ಕನ್ನಡಿಗ.. ಮಲೆನಾಡಿನ ಹುಡುಗ

  • Latest
  • Popular
  • Video

ಪ್ರೋತ್ಸಾಹ ಬರಹಗಾರನಿಗೆ ಪ್ರೋತ್ಸಾಹ ಎಂಬುದು ಬಡವನ ಪಾಲಿಗೆ ಸಿಗುವ ಒಂದೊತ್ತಿನ ಮೃಷ್ಟನ್ನಾ ದಂತೆ ©Walter DSouza

#ನನ್ನಬರಹ #ಕಾವ್ಯ  ಪ್ರೋತ್ಸಾಹ 

ಬರಹಗಾರನಿಗೆ ಪ್ರೋತ್ಸಾಹ ಎಂಬುದು 
ಬಡವನ ಪಾಲಿಗೆ
ಸಿಗುವ ಒಂದೊತ್ತಿನ ಮೃಷ್ಟನ್ನಾ ದಂತೆ

©Walter DSouza

ಜೀವನ ತೋಚಿದ ಹಾಗೆ ಜೀವಿಸಬೇಕು ಕಷ್ಟ-ಸುಖ, ನೋವು-ನಲಿವು, ಚಿಂತೆ-ದುಃಖ ಇದ್ದದ್ದೇ ಈ ಭೂಮಿ ಮೇಲೆ ನಾವೇ ಶಾಶ್ವತವಲ್ಲ ಅಂದಮೇಲೆ ಇವೆಲ್ಲ ಶಾಶ್ವತನ? ಖಂಡಿತ ಇಲ್ಲ ಬಂದದ್ದು ಬರಲಿ ಬದುಕು ಹಾಗೇ ಸಾಗುತ್ತಿರಲಿ ಕಾಪಾಡೋಕೆ, ಕೈಹಿಡಿಯೋಕೆ ದೇವರಿದ್ದಾರೆ "Be Happy" 🙂 ©Walter DSouza

 ಜೀವನ ತೋಚಿದ ಹಾಗೆ ಜೀವಿಸಬೇಕು
ಕಷ್ಟ-ಸುಖ, ನೋವು-ನಲಿವು, ಚಿಂತೆ-ದುಃಖ ಇದ್ದದ್ದೇ
ಈ ಭೂಮಿ ಮೇಲೆ ನಾವೇ ಶಾಶ್ವತವಲ್ಲ ಅಂದಮೇಲೆ  ಇವೆಲ್ಲ ಶಾಶ್ವತನ? ಖಂಡಿತ ಇಲ್ಲ
ಬಂದದ್ದು ಬರಲಿ ಬದುಕು ಹಾಗೇ ಸಾಗುತ್ತಿರಲಿ
ಕಾಪಾಡೋಕೆ, ಕೈಹಿಡಿಯೋಕೆ ದೇವರಿದ್ದಾರೆ

"Be Happy" 🙂

©Walter DSouza

#ಬದುಕು #ಜೀವನ

13 Love

White ಮನವೇ ಮರುಗದಿರು ಓ ಮನವೇ ಸೋತು ಎಡವಿ ಬಿದ್ದಾಗ ಹಾಡು ಅವಳೆಂದರೆ ನಾನೆಂದಿಗೂ ಕನವರಿಸುವ ಹೃದಯ ಗುನುಗುವ ಹಾಡು ©Walter DSouza

#ಪ್ರೀತಿ #love_shayari #ಅವಳು  White ಮನವೇ 

ಮರುಗದಿರು
ಓ ಮನವೇ 
ಸೋತು ಎಡವಿ ಬಿದ್ದಾಗ

ಹಾಡು 

ಅವಳೆಂದರೆ 
ನಾನೆಂದಿಗೂ ಕನವರಿಸುವ 
ಹೃದಯ ಗುನುಗುವ ಹಾಡು

©Walter DSouza

ನನ್ನೋಳಗಿನ ಒಲವ ಸುಧೆ ನೀನು ಕಡಲೊಡಲಿನ ಮುತ್ತು ನೀನು ಮನದ ಮಗ್ಗಲಿನ ದನಿ ನೀನು ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು.. ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ ©Walter DSouza

 ನನ್ನೋಳಗಿನ ಒಲವ ಸುಧೆ ನೀನು
ಕಡಲೊಡಲಿನ ಮುತ್ತು ನೀನು
ಮನದ ಮಗ್ಗಲಿನ ದನಿ ನೀನು
ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು..
ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ

©Walter DSouza

ನಾನು ಮತ್ತು ನನ್ನೋಳಗಿನ ನೀನು #ಪ್ರೀತಿ

15 Love

ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ ಎಲ್ಲವೂ ಸುಂದರ ಕನ್ನಡ ಎನ್ನುವುದೇ ಸುಮಧುರ" "ಕಲಿಯಬೇಕು, ಕಲಿಸಬೇಕು ನಾವು ಭಾಷೆಯ ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" "ಬೆಳೆಸಬೇಕು, ಬಳಸಬೇಕು ನಾವು ಕನ್ನಡ ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ " ಚೆಲುವ ನಾಡು ಕನ್ನಡ ನಾಡು ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ "ಎಲ್ಲೇ ಹೋದರು ಮರೆಯದಿರು ಕನ್ನಡ ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ " ©Walter DSouza

#ಜ್ಞಾನಿ  ಕನ್ನಡ ನಾಡು ಚಿನ್ನದ ಬೀಡು
ತ್ಯಾಗ ಸಂಕೇತದ ನಾಡು" 
"ಇಲ್ಲಿ ಎಲ್ಲವೂ ಸುಂದರ
ಕನ್ನಡ ಎನ್ನುವುದೇ ಸುಮಧುರ" 
"ಕಲಿಯಬೇಕು, ಕಲಿಸಬೇಕು ನಾವು ಭಾಷೆಯ
ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" 
"ಬೆಳೆಸಬೇಕು, ಬಳಸಬೇಕು ನಾವು ಕನ್ನಡ
ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ
" ಚೆಲುವ ನಾಡು ಕನ್ನಡ ನಾಡು
 ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ 
"ಎಲ್ಲೇ  ಹೋದರು ಮರೆಯದಿರು ಕನ್ನಡ 
ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ "

©Walter DSouza

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

12 Love

#ನನ್ನವಳು #ಪ್ರೀತಿ #love_qoutes  White ನಾಟಿದೆ ನನ್ನ ಕಣ್ಣು ನಿನ್ನ ಚಂದದ ಮೊಗದೆಡೆಗೆ
 ಸೆಳೆದಿದೆ ನಿನ್ನ ಕಣ್ಣೋಟ ನಾ ಸೋಲುವಂತೆ 
ಕರೆದಿದೆ ನಿನ್ನ ನಗು ನಾನು ಮತ್ತೆ ನಿನ್ನನ್ನೇ ಬಯಸುವಂತೆ 
ಮರುಳಾಗಿಸಿದೆ ನಿನ್ನಯ ಮಂದಹಾಸವೂ ನಿದ್ದೆಗೆಡಿಸಿದೆ ನಿನ್ನ ಕೈ ಬಳೆಗಳ ನಿನಾದ ನಾನೆಂದೂ ಮಲಗದಂತೆ
 ನಿನ್ನ ಕಾಲ್ಗೆಜ್ಜೆ ಪದೇ ಪದೇ ನನ್ನ ಕರೆದಂತಾಗಿದೆ 
ಬಯಸಿದೆ ಈ ಜೀವ ನಿನ್ನ ಸಹವಾಸವನ್ನೇ ಕೊನೆಗೂ ನಿನಗೆ ಸಂಪೂರ್ಣವಾಗಿ ಸೆರೆಯಾಗಿ ಬಿಟ್ಟೆ ನಾನು ಪ್ರೇಮಖೈದಿ ಯಾಗಿ ಇನ್ನೆಂದಿಗೂ ಬಿಡುಗಡೆಯನ್ನು ನಾ ಬಯಸೆನು

©Walter DSouza
Trending Topic