White ನಾಟಿದೆ ನನ್ನ ಕಣ್ಣು ನಿನ್ನ ಚಂದದ ಮೊಗದೆಡೆಗೆ
ಸೆಳೆದಿದೆ ನಿನ್ನ ಕಣ್ಣೋಟ ನಾ ಸೋಲುವಂತೆ
ಕರೆದಿದೆ ನಿನ್ನ ನಗು ನಾನು ಮತ್ತೆ ನಿನ್ನನ್ನೇ ಬಯಸುವಂತೆ
ಮರುಳಾಗಿಸಿದೆ ನಿನ್ನಯ ಮಂದಹಾಸವೂ ನಿದ್ದೆಗೆಡಿಸಿದೆ ನಿನ್ನ ಕೈ ಬಳೆಗಳ ನಿನಾದ ನಾನೆಂದೂ ಮಲಗದಂತೆ
ನಿನ್ನ ಕಾಲ್ಗೆಜ್ಜೆ ಪದೇ ಪದೇ ನನ್ನ ಕರೆದಂತಾಗಿದೆ
ಬಯಸಿದೆ ಈ ಜೀವ ನಿನ್ನ ಸಹವಾಸವನ್ನೇ ಕೊನೆಗೂ ನಿನಗೆ ಸಂಪೂರ್ಣವಾಗಿ ಸೆರೆಯಾಗಿ ಬಿಟ್ಟೆ ನಾನು ಪ್ರೇಮಖೈದಿ ಯಾಗಿ ಇನ್ನೆಂದಿಗೂ ಬಿಡುಗಡೆಯನ್ನು ನಾ ಬಯಸೆನು
©Walter DSouza
#love_qoutes #ನನ್ನವಳು