English
ನಿಮ್ಮೆಲ್ಲ ಮಜಲುಗಳ ಕೆಳ ಹೊಕ್ಕ ಕೈಕಾಲ್ತಲೆಗಳ ಲೆಕ್ಕ ಬಲ್ಲಿರೇನೂ....? ಜನರ ಅಂಗಾಂಗಗಳ ಕಿತ್ತು ಬೇರ್ಪಡಿಸಿ ಎಳೆದೆಳೆದು ತಿಂದ ಕ್ಯಾಟ್ಫಿಶ್ ಗಳೆಲ್ಲವೂ ನಿಮ್ಮ ಕೆರೆಯಲ್ಲೇ ಹುಟ್ಟಿಬೆಳೆದಿದ್ದಲ್ಲವೇ..? ಇನ್ನೇನು ಉಳಿದಿದೆ....? ಕೈಕಾಲ್ತಲೆಗಳ, ಅಂಗಾಂಗಗಳ ಕಿತ್ತಾಯಿತು...... ರಕ್ತ ಹೀರಾಯಿತು.....! ಇನ್ನುಳಿದದ್ದು ಮೇಲ್ತೇಲಿ ಬಂದು ನಿಂತ ಚರ್ಮಾಂಸ ಮೂಳೆಗಳಸ್ಟೇ..... ಅದನ್ನೂ ಬಿಡುವಿರಾ.....? ಇಲ್ಲವೇ ಇಲ್ಲ.....! ದಡ ಸೇರಿದ ಅರ್ಧ ದೇಹದ ಮೇಲೆ "ಜಾಲತಾಣ"ವ ರಚಿಸಿ ಗಹಗಹಿಸಿ ಗೊಳ್ ಎಂದು ನಗುವ ನೊಣಗಳು.. ತಮ್ಮ ಕೊಕ್ಕುಗಳನ್ನೇ "ಮಾಧ್ಯಮ"ವಾಗಿಸಿ ಮುತ್ತಿ ಅಳಿದುಳಿದ ಮಾಂಸಖಂಡಗಳ ಕಿತ್ತಾಡಿ ತಿನ್ನುವ ರಣಹದ್ದುಗಳು. ನಿಮ್ಮವರಲ್ಲವೇ....? ಇದನ್ನೆಲ್ಲವನ್ನು ನೋಡಿ ಬೆವರಿಳಿದು ಬೆಂಡಾಗಿ ದಡದಲ್ಲೇ ಕುಳಿತ ಅವನು ಹೇಗೆ ಕೆರೆಗಿಳಿದು ಈಜಾಡುವ ಮನಸ್ಸು ಮಾಡಿಯಾನೂ......! ಯೋಚಿಸಿ.... -ಭರತ್.ಆರ್ © Raj
Raj
12 Love

7 Love
ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡುರಸ್ತೆಯಲ್ಲಿ ನಿಂತಿದ್ದಾನೆ. ತನಗಂಟಿದ ಪ್ರತಿವಾದಗಳ ಕುರಿತು ಮಾತನಾಡಲು ಅಪಹಪಿಸುತ್ತಿದ್ದಾನೆ. ಸಿದ್ದಗೊಂಡ ಸಿದ್ದಾಂತಗಳಲ್ಲಿ ತನ್ನ ಮೇಲೋರಸಿದ ಸುಳ್ಳುಗಳ ಕೇಳಿ ಬೇಸರಗೊಂಡಿದ್ದಾನೆ. ತನ್ನೊಡಲ ಮಕ್ಕಳು ತನ್ನ ಬಳಿ ಬರಲು ಪ್ರಯತ್ನಿಸುತ್ತಿರುವುದ ಕಂಡು ಮರುಗುತ್ತಿದ್ದಾನೆ. ತನ್ನ ಮರೆತು ಮರೆಯಾದವರ ಮೇಲೆ ಮುನಿಸಿಕೊಂಡಿದ್ದಾನೆ. ಯಾರಿಗೂ ತಲುಪದೇ ಇಂದಿಗೂ ಅಸ್ಪೃಶ್ಯವಾಗಿಯೇ ಉಳಿದು ಅಳುತ್ತಿರುವ ಅಕ್ಷರಗಳ ಸಮಾಧಾನಪಡಿಸುತ್ತಿದ್ದಾನೆ. ಪುಸ್ತಕಗಳನ್ನೊತ್ತ ಅಂಬೇಡ್ಕರ್ ನಡು ರಸ್ತೆಯಲ್ಲಿ ನಿಂತಿದ್ದಾನೆ. -ಭರತ್. ಆರ್ © Raj
11 Love
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here