ನಿಮ್ಮೆಲ್ಲ ಮಜಲುಗಳ ಕೆಳ ಹೊಕ್ಕ
ಕೈಕಾಲ್ತಲೆಗಳ ಲೆಕ್ಕ ಬಲ್ಲಿರೇನೂ....?
ಜನರ ಅಂಗಾಂಗಗಳ
ಕಿತ್ತು ಬೇರ್ಪಡಿಸಿ ಎಳೆದೆಳೆದು
ತಿಂದ ಕ್ಯಾಟ್ಫಿಶ್ ಗಳೆಲ್ಲವೂ
ನಿಮ್ಮ ಕೆರೆಯಲ್ಲೇ
ಹುಟ್ಟಿಬೆಳೆದಿದ್ದಲ್ಲವೇ..?
ಇನ್ನೇನು ಉಳಿದಿದೆ....?
ಕೈಕಾಲ್ತಲೆಗಳ,
ಅಂಗಾಂಗಗಳ ಕಿತ್ತಾಯಿತು......
ರಕ್ತ ಹೀರಾಯಿತು.....!
ಇನ್ನುಳಿದದ್ದು ಮೇಲ್ತೇಲಿ
ಬಂದು ನಿಂತ ಚರ್ಮಾಂಸ
ಮೂಳೆಗಳಸ್ಟೇ.....
ಅದನ್ನೂ ಬಿಡುವಿರಾ.....?
ಇಲ್ಲವೇ ಇಲ್ಲ.....!
ದಡ ಸೇರಿದ
ಅರ್ಧ ದೇಹದ ಮೇಲೆ
"ಜಾಲತಾಣ"ವ ರಚಿಸಿ
ಗಹಗಹಿಸಿ ಗೊಳ್ ಎಂದು
ನಗುವ ನೊಣಗಳು..
ತಮ್ಮ ಕೊಕ್ಕುಗಳನ್ನೇ
"ಮಾಧ್ಯಮ"ವಾಗಿಸಿ ಮುತ್ತಿ
ಅಳಿದುಳಿದ ಮಾಂಸಖಂಡಗಳ
ಕಿತ್ತಾಡಿ ತಿನ್ನುವ ರಣಹದ್ದುಗಳು.
ನಿಮ್ಮವರಲ್ಲವೇ....?
ಇದನ್ನೆಲ್ಲವನ್ನು ನೋಡಿ
ಬೆವರಿಳಿದು
ಬೆಂಡಾಗಿ ದಡದಲ್ಲೇ ಕುಳಿತ
ಅವನು ಹೇಗೆ ಕೆರೆಗಿಳಿದು
ಈಜಾಡುವ ಮನಸ್ಸು
ಮಾಡಿಯಾನೂ......!
ಯೋಚಿಸಿ....
-ಭರತ್.ಆರ್
© Raj
#Silence