ಕನಸ ಕಾಣುವ ಕಣ್ಣಿಗೆ
ಎದುರಾದೆ ಏಕೆ ನೀ ಸುಮ್ಮಗೆ
ಇದ್ದೆ ನಾ ನನ್ನ ಪಾಡಿಗೆ
ಸೋತೆನು ನಿನ್ನ ಮೋಡಿಗೆ
ನಿನಗಾಗಿ ತಂದಿಹೆ ಮಲ್ಲಿಗೆ
ಬಳಿಗೆ ಬಾರೆ ನೀ ಮೆಲ್ಲಗೆ
ಬೀರಿ ಸಣ್ಣ ಕಿರುನಗೆ
ನಿನ್ನ ನಗುವಿನ ಸೊಬಗಿಗೆ
ಮುಂದೆ ಮಾತನಾಡುವವರನ್ನು ನಂಬು
ಹಿಂದೆ ಮಾತನಾಡುವವರನ್ನು ಗೌರವಿಸು
ಮುಂದೆ ಮಾತನಾಡುವವರು ನಿನ್ನ ಏಳಿಗೆಯನ್ನು ಬಯಸಿದರೆ
ಹಿಂದೆ ಮಾತನಾಡುವವರು ನಿನ್ನ ಏಳಿಗೆಗೆ ಕಾರಣಕರ್ತರಾಗಿರುತ್ತಾರೆ.
ಹಲವರಲ್ಲಿ ಕೆಲವರನ್ನ ಹುಡುಕು
ಕೆಲವರಲ್ಲಿ ಉಳಿದವರನ್ನ ಹುಡುಕು
ಉಳಿದವರಲ್ಲಿ ನಿನಗಾಗುವವರ ಹುಡುಕು
ಕೊನೆಗೆ ನಿನಗಾಗುವವರು ಒಬ್ಬರಾದರು ಸಿಕ್ಕರೆ
ಈ ಪ್ರಪಂಚದಲ್ಲಿ ನೀನೆ ಪುಣ್ಯವಂತನೆಂದು ಭಾವಿಸು
ನಂತರ ಅವರೊಂದಿಗೆ ನೆಮ್ಮದಿಯಿಂದ ಜೀವಿಸು.
Continue with Social Accounts
Facebook Googleor already have account Login Here