ಹುಟ್ಟಿದಾಗ ನಮಗೇನು ತಿಳಿದಿರುವುದಿಲ್ಲ
ಸತ್ತಾಗಲೂ ನಮಗೇನು ತಿಳಿಯುವುದಿಲ್ಲ
ಬದುಕಿದ್ದಾಗಲಾದರು ನಾವೇನಾದರು ತಿಳಿಯಲೇಬೇಕಲ್ಲ.
ಬದುಕೊಂದು ವಿಸ್ಮಯ
ನಾವು ನಮಗಾಗಿ ಮೀಸಲಿಡಲೇಬೇಕು ಒಂದಷ್ಟು ಸಮಯ
ಬಂದಾಗ ಪ್ರಾಯ, ಹಂಬಲಿಸಿದ್ದು ಮಾಯ
ನಂಬಬೇಕು ನಮ್ಮ ವೃತ್ತಿಯ
ಗುರುತಿಸಬೇಕು ಸಾಧನೆಯ ಹಾದಿಯ
ಅವರವರ ದಾರಿಯಲ್ಲಿ ಅವರಿಚ್ಚಿಯೇ ಅವರಿಗೆ ಶ್ರೇಷ್ಠ
ಯಾರು ಯಾರಿಗಾದರು ಎಂಬುದು ಮುಖ್ಯವಲ್ಲ
ತಾಂತ್ರಿಕ ಯುಗ, ಲಾಭವನ್ನಷ್ಟೆ ನೋಡುವ ಜನ
ಮಾರಟವಾಗದಿರಲಿ ಮಾನವೀಯತೆ
ಕೊನೆತನಕ ಇರಲಿ ಸನ್ನಡತೆ
ದುಡಿವ ಕೈ ದುಗುಡಪಟ್ಟರೆ
ಜೀವನ ಸಂಕಟ ಪಡುತ್ತದೆ
ಆಲೋಚಿಸಿ ನಡೆ ನಿನ್ನದೆ ದಾರಿಯಲ್ಲಿ
ನೀ ನಡೆದ ದಾರಿ ಮಾದರಿಯಾಗಿರಲಿ ಈ ಸಮಾಜದಲ್ಲಿ.
©Raghu Shivaswamy
Continue with Social Accounts
Facebook Googleor already have account Login Here