Ramya Prabhu

Ramya Prabhu

House wife

  • Latest
  • Popular
  • Repost
  • Video

White ಸವಿ ಸವಿ ನೆನಪು ಬಾಲ್ಯದ ನೆನಪು ನೆನೆದು ಸವಿದಷ್ಟು ಹೊನಪು ಮನೆಯ ಕೆಲಸವೆಲ್ಲಾ ಮುಗಿಸಿ ಸುಮ್ಮನೆ ಕುಳಿತಿದ್ದೆ. ಮಗ ಆಟ ಆಡುವುದು ಆಡುವುದು ನೋಡಿ ನನಗೆ ನನ್ನ ಆ ಅಮೂಲ್ಯವಾದ ಮತ್ತೆ ಬಾರದ ಬಾಲ್ಯದ ದಿನಗಳು ನೆನಪಾಗಿ ಕಣ್ತುಂಬಿ ಬಂತು. ಆ ದಿನಗಳೇ ಹಾಗೆ ಏನೋ ಅರಿಯದ ಮುಗ್ಧ ಮನಸ್ಸುಗಳು ಬೇಧಭಾವ ಇಲ್ಲದೆ ಜೊತೆಯಾಗಿ ಆಡಿ ಜೊತೆಯಾಗಿ ಕೂತು ಹಂಚಿ ಊಟ ಮಾಡುತ್ತಿದ್ದೇವು. ಬಾಲ್ಯದಲ್ಲಿ ಆಡದ ಆಟವಿಲ್ಲ ನೋಡದೆ ನೋಟವಿಲ್ಲಾ ಕೇಳದ ಪಾಠವಿಲ್ಲ ತಿನ್ನದ ಊಟವಿಲ್ಲಾ. ಚಿಂತೆಯಿಲ್ಲದ ಯಾವುದೇ ಜವಾಬ್ದಾರಿ ಇಲ್ಲದ ಬಾಲ್ಯ ಈಗ ಬೇಕೆಂದರು ಮತ್ತೆ ಬರದು.ಮರಕೋತಿ ಆಟ, ಚಿನ್ನಿದಾಂಡು, ಕುಂಟೆಬಿಲ್ಲೆ ಆಟ, ಸರಿತಪ್ಪು ಆಟ, ಕಳ್ಳ ಪೋಲಿಸ್ ಆಟ, ಮನೆಯಾಟ, ಮಣ್ಣಿನಲ್ಲಿರುವ ಆಟ, ಅಡುಗೆ ಆಟ, ನೀರಲ್ಲಿ ದೋಣಿ ಮಾಡಿ ಬಿಟ್ಟ ನೆನಪು, ಹೀಗೆ ಒಂದೇ ಎರಡೇ ಅಮ್ಮನ ಸೀರೆ ಉಟ್ಟು ಅಮ್ಮನಂತೆ ಆದದ್ದು ಗೊಂಬೆಯನ್ನು ಮಗುವೆಂದು ಅದಕ್ಕೆ ತಿನ್ನಿಸಿ ಸ್ನಾನ ಮಾಡಿಸುವುದು ಹೀಗೆ ತುಂಬಾ ಆಟಗಳನ್ನು ಆಡಿಕೊಂಡು ಬಾಲ್ಯ ಕಳೆದೇವು. ಪೇರಳೆ ,ನೇರಳೆ ,ಮುಳ್ಳುಹಣ್ಣು, ಚಾಪೆ ಹಣ್ಣು, ಬಾಳೆಹಣ್ಣು, ಬಾರಿಹಣ್ಣು, ನೆಲ್ಲಿಕಾಯಿ ಕಾಡಿನ ನೈಸರ್ಗಿಕವಾದ ಆರೋಗ್ಯಕರ ಹಣ್ಣುಗಳೇ ನಮಗೆ ಆಹಾರ ಆರೋಗ್ಯಕರ ಜೀವನ ನಮ್ಮದಾಗಿತ್ತು. ಗೆಳೆಯರೊಂದಿಗೆ ಆಟ ಆಡುತ್ತಿದ್ದರೆ ನಮಗೆ ಊಟ ಬೇಡ ಪಾಠ ಬೇಡ ಅಂತ ಅನ್ನಿಸುತ್ತಿತ್ತು. ಬಾಲ್ಯವೆಂದರೆ ಏನೋ ಖುಷಿ ಆ ಬಾಲ್ಯದ ದಿನಗಳನ್ನು ನೆನೆದು ಆಯಾಸವೆಲ್ಲಾ ಮಾಯಾ ಏನೋ ಒಂಥರಾ ಮನಸಿಗೆ ಸಮಾಧಾನ. ಜಂಟಾಟದ ಜೀವನದಲ್ಲಿ ಮುಳುಗಿದ್ದ ನಮಗೆ ಬಾಲ್ಯದ ನೆನಪುಗಳು ತರುವವು ತಂಪು... ©Ramya Prabhu

#ಜೀವನ #good_night  White ಸವಿ ಸವಿ ನೆನಪು 
ಬಾಲ್ಯದ ನೆನಪು 
ನೆನೆದು ಸವಿದಷ್ಟು ಹೊನಪು

ಮನೆಯ ಕೆಲಸವೆಲ್ಲಾ ಮುಗಿಸಿ ಸುಮ್ಮನೆ ಕುಳಿತಿದ್ದೆ. ಮಗ ಆಟ ಆಡುವುದು ಆಡುವುದು ನೋಡಿ ನನಗೆ ನನ್ನ ಆ  ಅಮೂಲ್ಯವಾದ ಮತ್ತೆ ಬಾರದ ಬಾಲ್ಯದ ದಿನಗಳು ನೆನಪಾಗಿ ಕಣ್ತುಂಬಿ ಬಂತು. ಆ ದಿನಗಳೇ ಹಾಗೆ ಏನೋ ಅರಿಯದ ಮುಗ್ಧ ಮನಸ್ಸುಗಳು ಬೇಧಭಾವ ಇಲ್ಲದೆ ಜೊತೆಯಾಗಿ ಆಡಿ ಜೊತೆಯಾಗಿ ಕೂತು ಹಂಚಿ ಊಟ ಮಾಡುತ್ತಿದ್ದೇವು. ಬಾಲ್ಯದಲ್ಲಿ ಆಡದ ಆಟವಿಲ್ಲ ನೋಡದೆ ನೋಟವಿಲ್ಲಾ ಕೇಳದ ಪಾಠವಿಲ್ಲ ತಿನ್ನದ ಊಟವಿಲ್ಲಾ. ಚಿಂತೆಯಿಲ್ಲದ ಯಾವುದೇ ಜವಾಬ್ದಾರಿ ಇಲ್ಲದ ಬಾಲ್ಯ  ಈಗ  ಬೇಕೆಂದರು ಮತ್ತೆ ಬರದು.ಮರಕೋತಿ ಆಟ, ಚಿನ್ನಿದಾಂಡು, ಕುಂಟೆಬಿಲ್ಲೆ ಆಟ,  ಸರಿತಪ್ಪು ಆಟ, ಕಳ್ಳ ಪೋಲಿಸ್ ಆಟ, ಮನೆಯಾಟ, ಮಣ್ಣಿನಲ್ಲಿರುವ ಆಟ, ಅಡುಗೆ ಆಟ,  ನೀರಲ್ಲಿ ದೋಣಿ ಮಾಡಿ ಬಿಟ್ಟ ನೆನಪು, ಹೀಗೆ ಒಂದೇ ಎರಡೇ ಅಮ್ಮನ ಸೀರೆ ಉಟ್ಟು ಅಮ್ಮನಂತೆ ಆದದ್ದು ಗೊಂಬೆಯನ್ನು ಮಗುವೆಂದು ಅದಕ್ಕೆ ತಿನ್ನಿಸಿ ಸ್ನಾನ ಮಾಡಿಸುವುದು ಹೀಗೆ ತುಂಬಾ ಆಟಗಳನ್ನು ಆಡಿಕೊಂಡು ಬಾಲ್ಯ ಕಳೆದೇವು. ಪೇರಳೆ ,ನೇರಳೆ ,ಮುಳ್ಳುಹಣ್ಣು, ಚಾಪೆ ಹಣ್ಣು, ಬಾಳೆಹಣ್ಣು, ಬಾರಿಹಣ್ಣು, ನೆಲ್ಲಿಕಾಯಿ ಕಾಡಿನ ನೈಸರ್ಗಿಕವಾದ ಆರೋಗ್ಯಕರ ಹಣ್ಣುಗಳೇ ನಮಗೆ ಆಹಾರ ಆರೋಗ್ಯಕರ ಜೀವನ ನಮ್ಮದಾಗಿತ್ತು.
ಗೆಳೆಯರೊಂದಿಗೆ ಆಟ ಆಡುತ್ತಿದ್ದರೆ ನಮಗೆ ಊಟ ಬೇಡ ಪಾಠ ಬೇಡ ಅಂತ ಅನ್ನಿಸುತ್ತಿತ್ತು. ಬಾಲ್ಯವೆಂದರೆ ಏನೋ ಖುಷಿ ಆ ಬಾಲ್ಯದ ದಿನಗಳನ್ನು ನೆನೆದು ಆಯಾಸವೆಲ್ಲಾ ಮಾಯಾ ಏನೋ ಒಂಥರಾ  ಮನಸಿಗೆ ಸಮಾಧಾನ. ಜಂಟಾಟದ ಜೀವನದಲ್ಲಿ ಮುಳುಗಿದ್ದ ನಮಗೆ ಬಾಲ್ಯದ ನೆನಪುಗಳು ತರುವವು ತಂಪು...

©Ramya Prabhu

#good_night

11 Love

ಕನವರಿಕೆಯಲೂ ನಿನ್ನೊಲವ ರಾಗ ಕೇಳುತಿರೆ ಕಷ್ಟಗಳೆಲ್ಲಾ ಇಷ್ಟಗಳಾಗಿ ನೆಮ್ಮದಿಯ ನಿದ್ರೆಗೆ ಜಾರಿರೇ ನಗುನಗುತ್ತ ಹಾಯಾಗಿ ನಿನ್ನ ಮಡಿಲಲಿ ಮಗುವಾಗಿ ಮಲಗಿದೆ ನನ್ನೊಲವೇ...... ©Ramya Prabhu

#ಕಾವ್ಯ #Yaari  ಕನವರಿಕೆಯಲೂ ನಿನ್ನೊಲವ ರಾಗ ಕೇಳುತಿರೆ ಕಷ್ಟಗಳೆಲ್ಲಾ
 ಇಷ್ಟಗಳಾಗಿ ನೆಮ್ಮದಿಯ ನಿದ್ರೆಗೆ ಜಾರಿರೇ ನಗುನಗುತ್ತ ಹಾಯಾಗಿ ನಿನ್ನ ಮಡಿಲಲಿ ಮಗುವಾಗಿ ಮಲಗಿದೆ ನನ್ನೊಲವೇ......

©Ramya Prabhu

#Yaari

8 Love

White "ಭಾವ ವೀಣೆ" ತಿಳಿನೀರ ಕೊಲದಲಿ ಮೌನ ಕಾನನದಲಿ ಸುತ್ತಲೂ ಹಸಿರಲ್ಲಿ ಜುಳು ಜುಳು ಧ್ಯಾನವಲ್ಲಿ|| ತನನಂ ತನನಂವೆಂದು ಮನವು ಹೊಮ್ಮಿತು ಮಧುರ ನಾದವು ಕೋಗಿಲೆ ಹಾಡಿತು ಪಂಚಮವೇದವು ಅರಳಿದ ತಾವರೆ ನೋಡಲು ಚೆಂದವು|| ವೀಣೆಯು ಹಿಡಿದು ಭಾವತಂತಿಯ ಮೀಟಿ ಮನದ ಭಾವನೆಗಳು ತನ್ನ ಎಲ್ಲೆ ದಾಟಿ ಹೊಸ ರಸಮಯ ಲೋಕ ಕಣ್ಣೆದುರು ಸೃಷ್ಟಿಸಿ ಗಮಕಗಳ ನಾದವು ನನ್ನೆದುರು|| ಈ ಸೃಷ್ಟಿಯೇ ಒಂದು ಸಂಗೀತಮಯವೂ ಸರಿಗಮ ಪದಗಳ ನಾದಸ್ವರವೂ ಹೃದಯದಿ ಆಸ್ವಾದಿಸುವ ಭಾವನೆಯು ಅವನಿಚ್ಛೆಯ ಬದುಕು ವಿಧಿಯ ಲೀಲೆಯು|| ©Ramya Prabhu

#ಕಾವ್ಯ  White "ಭಾವ ವೀಣೆ" 

ತಿಳಿನೀರ ಕೊಲದಲಿ 
ಮೌನ ಕಾನನದಲಿ 
ಸುತ್ತಲೂ ಹಸಿರಲ್ಲಿ 
ಜುಳು ಜುಳು ಧ್ಯಾನವಲ್ಲಿ||

ತನನಂ ತನನಂವೆಂದು ಮನವು 
ಹೊಮ್ಮಿತು ಮಧುರ ನಾದವು 
ಕೋಗಿಲೆ ಹಾಡಿತು ಪಂಚಮವೇದವು 
ಅರಳಿದ ತಾವರೆ ನೋಡಲು ಚೆಂದವು||

ವೀಣೆಯು ಹಿಡಿದು ಭಾವತಂತಿಯ ಮೀಟಿ
ಮನದ ಭಾವನೆಗಳು ತನ್ನ ಎಲ್ಲೆ ದಾಟಿ 
ಹೊಸ ರಸಮಯ ಲೋಕ ಕಣ್ಣೆದುರು 
ಸೃಷ್ಟಿಸಿ ಗಮಕಗಳ ನಾದವು ನನ್ನೆದುರು||

ಈ ಸೃಷ್ಟಿಯೇ ಒಂದು ಸಂಗೀತಮಯವೂ 
ಸರಿಗಮ ಪದಗಳ  ನಾದಸ್ವರವೂ
ಹೃದಯದಿ ಆಸ್ವಾದಿಸುವ ಭಾವನೆಯು 
ಅವನಿಚ್ಛೆಯ ಬದುಕು ವಿಧಿಯ ಲೀಲೆಯು||

©Ramya Prabhu

love

10 Love

Trending Topic