ನೀ ನಕ್ಷತ್ರವಾಗಿ ಮಿಂಚಲು
ನಾ ಇರುಳಾಗಬೇಕಲ್ಲವೇ,
ನೀನು ಅಕ್ಷರ
ನಾನು ಹಲುಗೆ.
ನಿನ್ನಿಲ್ಲದಿರೆ ನಾನಿಲ್ಲ ನಾನಿಲ್ಲದಿರೆ ನೀನಿಲ್ಲ
ನಮ್ಮ ಬಂಧ ಸಾಮಾನ್ಯ ಬೆಸುಗೆಯಲ್ಲ.
ನೀನು ಬೇಕು ಅನ್ನೋರಿಗೆಲ್ಲ,
ನಾನು ಸಹ ಬೇಕು.
ಮುಪ್ಪು ತೋರುವ ನೆರೇಗುದಲನು
ಮುಚ್ಚಿಟ್ಟು ನಾಟಕೀಯ ಯೌವನ ತೋರಲು
ಕಪ್ಪು ಬಣ್ಣದಲ್ಲಿ ನನ್ನೆ ಲೆಪಿಸುವರು.
ದುಡಿಯುವ ದೇಹಕ್ಕೆ ನೀನು ಬೇಕು
ದಣಿಯುವ ದೇಹಕ್ಕೆ ನಾನು ಬೇಕು
ಹಗಲಿರಳುಗಳು ಬದುಕಿನ ಹೆಗಲುಗಳು
ಕಪ್ಪು ಬಿಳುಪಿಲ್ಲದೇ ಎಲ್ಲಿದೆ ಬದುಕು.
©Manassumeena
#kanndapoem