ನಿನ್ನ ಸಾಮರ್ಥ್ಯ ಇನ್ನೊಬ್ಬರ
ಮನವ ಬೆಳಗುವಂತಿದ್ದರೆ
ಕ್ಷಣವೂ ಯೋಚಿಸಬೇಡಾ
ಬೆಳಗಿಸಾ ಬಾಳನು.
ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ
ಹೊತ್ತಬೇಕಾದ ಜ್ವಾಲೆ ಇರದಿರೆ
ಬೆಳಕು ಬೆಳಗದು.
ಹಾಗೇ ಸಾಮರ್ಥ್ಯ ಒಳಗಿದ್ದರು
ಅದನು ಜಾಗೃತಗೊಳಿಸುವ
ಪ್ರೇರಣೆ ಬೇಕು...
ಆ ಪ್ರೇರಣೆ ನೀನಾಗುವ
ಅವಕಾಶ ದೊರೆತಾಗ
ಮತ್ತೆ ಹಿಂಜರಿಯಬೇಡಾ.
©Gayatri Huddar
#ujala