Alone ನಿನ್ನಂತರಾಳದ ಒಲವನ್ನರಿತು
ನಿನಗಂಟಿಕೊಂಡಿರುವೇ ಹೊರತು
ನಿನ್ನನ್ನಲ್ಲ.
ಮೋಸ ಮಾಡಿದ್ದು ನಿನ್ನೊಳಗಿನ
ಪ್ರೀತಿಗೆ ನನಗಲ್ಲ.
ತಪ್ಪಿನರಿವಾಗಿ ಕ್ಷಮಿಸಿದರು
ಮನಸೊಪ್ಪದು ಈ ಸಲ್ಲದ ಸಂಬಂಧವ.
ಸಾಯಿಸಲೊರಟಾಗ ಇಷ್ಟುದಿನ
ಸಹಿಸಿದ್ದೇತಕೆ ಎನ್ನುವ ಮನಸ್ಸು.
ಬಿಟ್ಟೆಲ್ಲವ ಬದುಕಬೇಕೆನಿಸುವುದೊಂದೊಮ್ಮೆ
ಬಿಟ್ಟರೇ ಅದೇಗೆ ಬದುಕುವೇ
ಎನ್ನುವ ಸಂಶಯ ಸುಳಿದಾಡುವುದು ಮನದಿ.
ಮನವಿಯೊಂದಿದೆ ಈ ಮನದಿ
ಮರಳಿಸೇರದಿರು ಈ ಮನವ
ಮತ್ತದೇ ಸಲಿಗೆಯಿಂದ.
ಸಾಕಿಷ್ಟು ಸಂತಾಪಿಸಿದ್ದು
ಸಂಬಂಧದ ಸಹವಾಸದಿಂದ...
-ರವಿly.
ನಿನ್ನಂತರಾಳದ ಒಲವನ್ನರಿತು
ನಿನಗಂಟಿಕೊಂಡಿರುವೇ ಹೊರತು
ನಿನ್ನನ್ನಲ್ಲ.
ಮೋಸ ಮಾಡಿದ್ದು ನಿನ್ನೊಳಗಿನ
ಪ್ರೀತಿಗೆ ನನಗಲ್ಲ.
ತಪ್ಪಿನರಿವಾಗಿ ಕ್ಷಮಿಸಿದರು
ಮನಸೊಪ್ಪದು ಈ ಸಲ್ಲದ ಸಂಬಂಧವ.